Dr. Sharath Kumar Rao: ರೋಗಿಗಳಿಗೆ ರಕ್ತಕಣಗಳ ಮೂಲಕ ಚಿಕಿತ್ಸೆ

ಡಾ. ಶರತ್ ಕುಮಾರ್ ರಾವ್ ಇವರು ಇತ್ತೀಚೆಗೆ ರೇಡಿಯೋ ಸಾರಂಗ್ ನಲ್ಲಿ ಪ್ರಸಾರವಾಗುವ ಹಲೋ ವೆನ್ಲಾಕ್ ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ರಕ್ತದ ವಿಂಗಡಣೆ ಹಾಗೂ ಪರಿಚಲನೆಯ ಕುರಿತು ಮಾಹಿತಿಯನ್ನು ನೀಡಿದರು.

 

ಸಾಮಾನ್ಯವಾಗಿ ಜನಸಾಮಾನ್ಯರು ರಕ್ತದ ವಿಂಗಡಣೆ ಎಂದಾಗ ರಕ್ತದ ಗುಂಪುಗಳ ಆಧಾರದ ಮೇಲೆ ವಿಂಗಡಿಸುವುದು ಎಂದು ತಿಳಿದುಕೊಂಡಿದ್ದಾರೆ. ಆದರೆ ರಕ್ತದಲ್ಲಿ ಹಲವಾರು ವಿಭಾಗಗಳಿದ್ದು ಆ ವಿಭಾಗಗಳಡಿ ಇನ್ನಷ್ಟು ಸಂಶೋಧನೆ ನಡೆಸಿದ ಮೇಲೆ ಅದರಲ್ಲಿ ಪ್ಲಾಸ್ಮಾ, ಅದೇ ರೀತಿ ರಕ್ತಕಣಗಳು, ಬಿಳಿ ರಕ್ತಕಣಗಳು, ಹಿಮೋಗ್ಲೊಬೀನ್ ಹೀಗೆ ವರ್ಗೀಕರಿಸಲಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ರಕ್ತದ ವಿವಿಧ ಭಾಗಗಳನ್ನು ನೀಡಲಾಗುತ್ತದೆ. ಹೀಗಾಗಿ ರಕ್ತದ ವಿಂಗಡಣೆ ಹಾಗೂ ಪರಿಚಲನೆ ಅತಿ ಮುಖ್ಯವಾದ ವೈದ್ಯಕೀಯ ಅವಶ್ಯಕತೆಯಾಗಿದೆ. ರಕ್ತದ ವಿಂಗಡಣೆ ಹಾಗೂ ಪರಿಚಲನೆ ಕ್ಲಿಷ್ಟಕರವಾದ ವಿಷಯವಾಗಿದ್ದು, ಇದರ ಕುರಿತು ವಿವರಾತ್ಮಕವಾದ ಮಾಹಿತಿಯನ್ನು ಡಾ. ಶರತ್ ಕುಮಾರ್ ರಾವ್ ಅವರು ನೀಡಿದರು.  ನೇರಪ್ರಸಾರ ಕಾರ್ಯಕ್ರಮದಲ್ಲಿ ಹಲವಾರು ಕೇಳುಗರು ಕರೆ ಮಾಡಿ ತಮ್ಮ ಸಂದೇಹಗಳನ್ನು, ಅದಕ್ಕೆ ಸೂಕ್ತ ಉತ್ತರಗಳನ್ನು ವೈದ್ಯರಿಂದ ಪಡೆದುಕೊಂಡರು.

-RJ Roshan Crasta