Babitha J. Shetty: ಆತ್ಮವಿಶ್ವಾಸ, ಪ್ರೋತ್ಸಾಹ ಕ್ರೀಡೆಯಲ್ಲಿ ನೆಲೆ ಕಲ್ಪಿಸಿತು

ಕ್ರೀಡೆಯಲ್ಲಿ ಭಾಗವಹಿಸಿದಾಗ ಸಿಕ್ಕ ಪ್ರೋತ್ಸಾಹ ನನ್ನಲ್ಲಿದ್ದ ಆತ್ಮವಿಶ್ವಾಸ ಕ್ರೀಡೆಯಲ್ಲಿ ಒಳ್ಳೆಯ ಹೆಸರು ಮಾಡಲು ಅವಕಾಶ  ಕಲ್ಪಿಸಿತು, ಎಂದು ರಾಷ್ಟ್ರೀಯ ಕ್ರೀಡಾಪಟು ಬಬಿತ. ಜೆ. ಶೆಟ್ಟಿ. ನುಡಿದರು. ಅವರು ರೇಡಿಯೋ ಸಾರಂಗ್'ನಲ್ಲಿ ಜುಲಾಯಿ 6ರಂದು ನಡೆದ ಹೃದಯರಾಗ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮೂಲತ: ಮುಂಡ್ಕೂರು ಗ್ರಾಮೀಣ ಪ್ರದೇಶದ ಕೃಷಿ ಕುಟುಂಬದ ಇವರು ಶಾಲಾ ದಿನಗಳಲ್ಲಿ ಶಿಕ್ಷಕರಾದ ಉದಯಶಂಕರ್ ಅವರ ಪ್ರೋತ್ಸಾಹದಿಂದ ಕೋಕೋ, ವಾಲಿಬಾಲ್, ಥ್ರೋಬಾಲ್. ಕ್ರೀಡಾ ತಂಡದ ನಾಯಕಿಯಾದದ್ದು ಕ್ರೀಡಾಸಕ್ತಿಗೆ ಪ್ರೇರಣೆಯಾಯಿತು, ಎಂದರು.

ವಿವಾಹದ ನಂತರ ಪತಿ ಜಯರಾಮ್ ಶೆಟ್ಟಿ, ಮಗ ನಿನಾದ್ ಇವರ ಸಹಕಾರ ಪ್ರಾಕ್ಟೀಸ್ ಮಾಡುವಾಗ ಆಟಗಾರರಾದ ಅಬ್ದುಲ್ ರಹಿಮಾನ್, ಚಂದ್ರಶೇಖರ್ (ನಿವೃತ್ತ ಸೈನಿಕ), ನಾರಾಯಣ್, ಇವರು ಓಟದ ಬಗ್ಗೆ ಫಿಟ್ನೆಸ್ ಬಗ್ಗೆ ನೀಡಿದ ಮಾಹಿತಿ ಚಿನ್ನದ ಪದಕದ ಗಳಿಕೆಗೆ ಮುನ್ನುಡಿ ಬರೆಯಿತು, ಎಂದರು.

ಗೋವಾ, ಹೈದರಾಬಾದ್, ಬೆಂಗಳೂರು, ಮಹಾರಾಷ್ಟ್ರ, ಕೇರಳ ಮೊದಲಾದ ರಾಜ್ಯಗಳಲ್ಲಿ ಹಾಗೂ ಮಾಸ್ಟರ್ ಆತ್ಲೇಟಿಕ್ ಫೆಡೆರೇಷನ್'ನವರು ನಡೆಸುವ ಕ್ರೀಡಾಕೂಟಗಳಲ್ಲಿ ಅಲ್ಲದೆ ಕೇರಳದ ಕೊಝಿಕೋಡ್'ನಲ್ಲಿ ನಡೆದ  ರಾಷ್ಟ್ರೀಯ ಕ್ರೀಡಾ ಕೂಟ 2022ರಲ್ಲಿ ನಡೆದ ಪ್ಯಾನ್ ಇಂಡಿಯಾ ಕೂಟದಲ್ಲಿ ಚಿನ್ನದ ಪದಕ ಪಡೆದ ಬಗ್ಗೆ ಹರುಷ  ವ್ಯಕ್ತಪಡಿಸಿದರು.

ಪ್ರಸ್ತುತ ಒಡಿಯೂರು ವಿವಿದೋದ್ದೇಶ  ಬ್ಯಾಂಕಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಬ್ಯಾಂಕಿನವರ ಸಹಕಾರ ನೆನೆದರು. ಮುಂದೆ ತಾವೀಗ  ವಾಸವಾಗಿರುವ  ಸುರತ್ಕಲ್ ಪ್ರದೇಶದಲ್ಲಿರುವ ಯುವ ಓಟಗಾರರಿಗೆ ತರಬೇತಿ ನೀಡುವ ಕನಸಿದೆ, ಎಂದರು.

ಬಬಿತಾ ಅವರು ಕೇಳುಗರೊಂದಿಗೆ ಮಾತನಾಡಿ ಖುಷಿಪಟ್ಟರು.



                        - ಎಡ್ವರ್ಡ್ ಲೋಬೊ, ರೇಡಿಯೋ ಸಾರಂಗ್